In the News 

 

 

 

  • 02-11-2008: ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಕುರಿತು ವಿವಿಧ ಸ್ಪರ್ಧೆ. For Details Click here.

 

  • 20-10-2008: Property tax application is now online for 12 wards.To have access click here.  

 

  • 31-05-2008:  Birth and Death is now online

    Birth and Death online application is launched today.  The citizens can view the details of birth and death from the year 1996 to 2005. To have access click here  OR visit the link Birth/Death

     

  • Election 2008: ನವೆಂಬರ್ 2007ರಲ್ಲಿ ಬಿ.ಜೆ.ಪಿ. ಮತ್ತು ಜನತಾದಳ ಸಂಯುಕ್ತ ಸರ್ಕಾರದಲ್ಲಿ  ಒಡಕುಂಟಾಗಿ ಸರ್ಕಾರ ಬಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 6 ತಿಂಗಳ ಅವಧಿಗೆ ರಾಷ್ಟ್ರಪತಿ ಆಡಳಿತವನ್ನು ಘೋಷಿಸಲಾಯಿತು .ರಾಷ್ಟ್ರಪತಿ ಆಡಳಿತಾವಧಿ 6 ತಿಂಗಳು ಇದ್ದು , ಅವಧಿ ಮುಗಿಯುವುದರೊಳಗಾಗಿ ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಸಲು ಚುನಾವಣಾ ಅಯೋಗವು ಭರದ   ಸಿದ್ಧತೆಗಳನ್ನು ನಡೆಸತೊಡಗಿತು.

ಮೊದಲನೆ ಹಂತವಾಗಿ ಮತದಾರರ ಪಟ್ಟಿ ಸಿದ್ದತೆ ಈ ಹಿಂದೆ ತಯಾರಿಸಲಾದ ಮತದಾರರ ಪಟ್ಟಿಯನ್ನು 14-12-2007 ರಿಂದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಾರಂಭವಾಗಿ, 204 BLO ಮತ್ತು 21 ಜನ ನೊಡಲ್ ಆಧಿಕಾರಿಗಳನ್ನು ನೇಮಿಸಲಾಗಿ, ಮತದಾರರ ಪಟ್ಟಿಯನ್ನು ತೆಗೆದುಕೊಂಡು ಅದರ ಪ್ರಕಾರ ಮತದಾರರು ಇದ್ದಾರೆಯೇ ಎಂಬ ಬಗ್ಗೆ ಮತ್ತು EPIC ಎಷ್ಟು ಮತದಾರರು ಹೊಂದಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಯಿತು. ಜನವರಿ ತಿಂಗಳಲ್ಲಿ ಹೊಸ ಮತದಾರರ ಪಟ್ಟಿಯನ್ನು ಸಿದ್ದಪಡಿಸಲಾಯಿತು. 

ದಾವಣಗೆರೆ ವಿಧಾನಸಭಾ ಕ್ಷೇತ್ರಕ್ಕೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕೆಲವು ಪ್ರದೇಶಗಳನ್ನು ಸೇರಿಸಿ ಎರಡು ಕ್ಷೇತ್ರಗಳನ್ನಾಗಿ ವಿಂಗಡಿಸಲಾಯಿತು.(1) 106-ದಾವಣಗೆರೆ ಉತ್ತರ (2) 107- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳೆಂದು  ವಿಂಗಡಿಸಿದ್ದು, ದಿನಾಂಕ: 06-04-2008 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಯಿತು. 106-ದಾವಣಗೆರೆ ಉತ್ತರದಲ್ಲಿ 197 ಹಾಗೂ 107- ದಾವಣಗೆರೆ ದಕ್ಷಿಣಕ್ಕೆ  177 ಮತಗಟ್ಟೆಗಳನ್ನು ಮಾಡಲಾಗಿದೆ. 106- ದಾವಣಗೆರೆ ಉತ್ತರಕ್ಕೆ ಶ್ರೀ.ಡಿ ಹೆಚ್. ಪಾಂಡುರಂಗನ್, ಉಪ ಆಯುಕ್ತರು , ಮಹಾನಗರ ಪಾಲಿಕೆ ದಾವಣಗೆರೆ.ಇವರು ಮತ್ತು 107- ದಾವಣಗೆರೆ ದಕ್ಷಿಣಕ್ಕೆ  ಶ್ರೀ ಪ್ರಾಣಲಿಂಗ ಶಿವಸಾಲಿ  ಆಯುಕ್ತರು, ಮಹಾನಗರ ಪಾಲಿಕೆ ದಾವಣಗೆರೆ, ಇವರುಗಳನ್ನು ಚುನಾವಣಾಧಿಕಾರಿಗಳನ್ನಾಗಿ ಹಾಗೂ ಎಸ್.ಎಸ್ ಬಿರಾದಾರ್  ಇವರು 106- ದಾವಣಗೆರೆ ಉತ್ತರಕ್ಕೆ ಸಹಾಯಕ ಚುನಾವಣಾಧಿಕಾರಿ ಮತ್ತು ಶ್ರೀಮತಿ ವಿಜಯಕುಮಾರಿ, ಕೌನ್ಸಿಲ್ ಕಾರ್ಯದರ್ಶಿ ಮಹಾನಗರ ಪಾಲಿಕೆ ಇವರು 107- ದಾವಣಗೆರೆ ದಕ್ಷಿಣಕ್ಕೆ ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ನೇಮಿಸಿ  ಚುನಾವಣಾ ಆಯೋಗವು ಆದೇಶ ಹೊರಡಿಸಿತು. ದಿನಾಂಕ 29-04-2008 ರಂದು ಚುನಾವಣೆ ಅಧಿಸೂಚನೆಯನ್ನು ಘೋಷಿಸಿತು. ಅಂದಿನಿಂದ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿತು.

ದಾವಣಗೆರೆ ಜಿಲ್ಲೆಯ ಎರಡನೆ ಹಂತದ ಚುನಾವಣಾ ವೇಳಾಪಟ್ಟಿಯಲ್ಲಿ ಸೇರ್ಪಡೆಯಾಯಿತು. ಆ ಪ್ರಕಾರ ದಿನಾಂಕ   22-04-2008 ರಿಂದ ನಾಮ ನಿರ್ದೇಶನ ಕಾರ್ಯವು ಪ್ರಾರಂಭಗೊಂಡು ದಿನಾಂಕ: 29-04-2008 ನಾಮ ನಿರ್ದೇಶನಕ್ಕೆ ಕೊನೆಯ ದಿನಾಂಕವಾಗಿತ್ತು. 107-ದಾವಣಗೆರೆ ದಕ್ಷಿಣಕ್ಕೆ ಒಟ್ಟು 17 ಅಭ್ಯರ್ಥಿಗಳು ನಾಮ ಪತ್ರಗಳನ್ನು ಸಲ್ಲಿಸಿದ್ದರು .ಇದರಲ್ಲಿ ಒಂದು ನಾಮಪತ್ರ ಮಾತ್ರ ದಿನಾಂಕ: 30-04-2008 ರಂದು ನಡೆದ ನಾಮಪತ್ರಗಳ ಪರಿಶೀಲನೆ ಸಮಯದಲ್ಲಿ ತಿರಸ್ಕೃತಗೊಂಡಿತು .ಇನ್ನು 16 ನಾಮಪತ್ರಗಳ ಕ್ರಮಬದ್ಧವಾಗಿದ್ದವು. ಇದರಲ್ಲಿ 6 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದರು. ಚುನಾವಣಾ ಕಣದಲ್ಲಿ  10 ಅಭ್ಯರ್ಥಿಗಳು ಉಳಿದರು. For Details Click here.

106-ದಾವಣಗೆರೆ ದಕ್ಷಿಣಕ್ಕೆ ಒಟ್ಟು 15 ಅಭ್ಯರ್ಥಿಗಳು ನಾಮ ಪತ್ರಗಳನ್ನು ಸಲ್ಲಿಸಿದ್ದರು .ಇದರಲ್ಲಿ 4 ನಾಮಪತ್ರ ದಿನಾಂಕ: 30-04-2008 ರಂದು ನಡೆದ ನಾಮಪತ್ರಗಳ ಪರಿಶೀಲನೆ ಸಮಯದಲ್ಲಿ ತಿರಸ್ಕೃತಗೊಂಡಿತು .ಇನ್ನು 11 ನಾಮಪತ್ರಗಳ ಕ್ರಮಬದ್ಧವಾಗಿದ್ದವು.  ಚುನಾವಣಾ ಕಣದಲ್ಲಿ  11 ಅಭ್ಯರ್ಥಿಗಳು ಉಳಿದರು. For Details Click here.

ದಿನಾಂಕ 16-05-2008 ರಂದು ಚುನಾವಣೆ ಶಾಂತಿಯುತವಾಗಿ ನಡೆಯಿತು.  ಯಾವುದೇ ಅಹಿತಕರ ಘಟನೆಗಳಿಗ ಅವಕಾಶವಾಗದಂತೆ ಜಿಲ್ಲಾರಕ್ಷಣಾಧಿಕಾರಿಗಳು ಮತ್ತು ಜಿಲ್ಲಾಚುನಾವಣಾಧಿಕಾರಿಗಳು ಸೂಕ್ತ  ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಂಡಿದ್ದರು.

ದಿನಾಂಕ 25-05-2008 ರಂದು ಬೆಳಿಗ್ಗೆ 8-00 ಗಂಟೆಗೆ ಸರಿಯಾಗಿ ಮತಏಣಿಕೆ ಕಾರ್ಯ ಪ್ರಾರಂಭವಾಯಿತು. ಒಂದೊಂದು ಕ್ಷೇತ್ರಕ್ಕೆ 14 ಟೇಬಲ್ ಗಳನ್ನು ಏಣಿಕೆಗೆ ನಿಯೋಜಿಸಲಾಗಿತ್ತು.  107-ಪಕ್ಷದಲ್ಲಿ ಶಾಮನೂರು ಶಿವಶಂಕರಪ್ಪ ಕಾಂಗ್ರೇಸ್(ಐ) 106  ರಲ್ಲಿ ಎಸ್ ಎ ರವೀಂದ್ರನಾಥ (ಬಿ.ಜೆ.ಪಿ.) ವಿಜೇತರಾದರು.

 For  more  Details Click here.

 * 106-Davanagere North.

 * 107-Davanagere South.

 

 

  •  29-02-2008: Mayor and Deputy Mayor declared

        Smt. Madamma Muniswamy is declared as the Mayor and Sri. Jayanna P S as the Deputy Mayor of the Davanagere City Corporation.

 

                            

    Smt. Madamma Muni Swamy        Sri. Jayanna P S

 

 

 

 

 

 

 

 

 

 

 

Last Updated:12/03/2009                        Managed By : Sri.S S Biradar,AEE ph:94484-15109, Sri.Krishnamurthy,JE ph:94482-74933, Sri.Thimappa, Environmental Engineer, ph:98444-96678, Sri. M P Bheemapa, Health Inspector, ph: 98444-42942, Sri. Gopya Nayak H T, Health Inspector, ph:94486-55773